ಅಭಿಪ್ರಾಯ / ಸಲಹೆಗಳು

ಲಿಂಗಸೂಗೂರು

ಡಸಾಲ್ಟ್ ಸಿಸ್ಟಮ್ಸ್ - ಜಿಟಿಟಿಸಿ ತರಬೇತಿ ಕಾರ್ಯಕ್ರಮ

ಪರಿಚಯ

3ಡಿ ಅನುಭವದ ಕಂಪನಿಯಾದ ಡಾಸಲ್ಟ್ ಸಿಸ್ಟಮ್ಸ್, ಉತ್ಪನ್ನಗಳನ್ನು ವಿನ್ಯಾಸಗೊಳಿಸುವ, ಉತ್ಪಾದಿಸುವ ಮತ್ತು ಬೆಂಬಲಿಸುವ ವಿಧಾನವನ್ನು ಪರಿವರ್ತಿಸಲು ವಿಶ್ವದ ಪ್ರಮುಖ 3ಡಿ ತಂತ್ರಾಂಶ ಅಪ್ಲಿಕೇಶನ್ ಗಳನ್ನು ಬಳಸಿಕೊಳ್ಳುವ ಮೂಲಕ ಸುಸ್ಥಿರ ಆವಿಷ್ಕಾರಗಳನ್ನು ಕಲ್ಪಿಸಿಕೊಳ್ಳಲು ವರ್ಚುವಲ್ ಬ್ರಹ್ಮಾಂಡಗಳನ್ನು ಹೊಂದಿರುವ ವ್ಯವಹಾರಗಳು ಮತ್ತು ಜನರಿಗೆ ಒದಗಿಸುತ್ತದೆ, ಇದು ವ್ಯವಹಾರಗಳಿಗೆ ಸಂತೋಷದಾಯಕ ಗ್ರಾಹಕ ಅನುಭವಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ. 


3ಡಿ ಅನುಭವ ವೇದಿಕೆ ಮತ್ತು ಪರಿಹಾರ

3ಡಿ ಅನುಭವ ವೇದಿಕೆ ಒಂದು ವ್ಯವಹಾರ ಅನುಭವ ವೇದಿಕೆಯಾಗಿದೆ. ಇದು ನಾಳಿನ ಕ್ರಿಯಾತ್ಮಕ ಕಾರ್ಯ ವಾತಾವರಣದಲ್ಲಿ ಯಶಸ್ಸಿಗೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವಿಶಿಷ್ಟ ತಂತ್ರಾಂಶ ಪರಿಹಾರಗಳನ್ನು ಒದಗಿಸುತ್ತದೆ - ಮಾರುಕಟ್ಟೆಯಿಂದ ಮಾರಾಟದವರೆಗೆ, ಮಾರಾಟದಿಂದ ಎಂಜಿನಿಯರಿಂಗ್ ವರೆಗಿನ ಅಂಶಗಳನ್ನು ಒಳಗೊಂಡಿರುತ್ತದೆ - ಇದು ಉದ್ಯೋಗಾವಕಾಶದ ಅನುಭವಗಳಲ್ಲಿ ಭಿನ್ನತೆಗಳನ್ನು ರೂಪಿಸಲು ನಿಮಗೆ ಸಹಾಯ ಮಾಡುತ್ತದೆ. 

 

ಏಕೈಕ, ಸುಲಭವಾಗಿ ಬಳಸಬಹುದಾದ ಮುಖಾಮುಖಿ(ಇಂಟರ್ ಫೇಸ್)ಯೊಂದಿಗೆ, ವಿದ್ಯಾರ್ಥಿಗಳು 3ಡಿ ಅನುಭವದ ವೇದಿಕೆ ಚಾಲಿತ ಉದ್ಯಮ ಪರಿಹಾರ ಅನುಭವಗಳಿಂದ ಕಲಿಯಲು ಸಾಧ್ಯವಾಗುತ್ತದೆ, ಸಹಯೋಗ, ಸಂವಾದಾತ್ಮಕ ಪರಿಸರದಲ್ಲಿ 3ಡಿ ವಿನ್ಯಾಸ, ವಿಶ್ಲೇಷಣೆ, ಸಿಮ್ಯುಲೇಶನ್ ಮತ್ತು ಬುದ್ಧಿಮತ್ತೆಯ ತಂತ್ರಾಂಶವನ್ನು ಆಧರಿಸಿದೆ. ಇದು ಆವರಣದಲ್ಲಿ ಮತ್ತು ಸಾರ್ವಜನಿಕವಾಗಿ ಅಥವಾ ಕ್ಲೌಡ್ ನಲ್ಲಿ ಲಭ್ಯವಿದೆ.


ಸೆಂಟರ್ ಆಫ್ ಎಕ್ಸಲೆನ್ಸ್ ನ ಉದ್ದೇಶಗಳು

 

ಉತ್ಕೃಷ್ಟತೆಯ ಕೇಂದ್ರ (ಸಿಒಇ) ಪ್ರಾಥಮಿಕವಾಗಿ ಉತ್ತರ ಕರ್ನಾಟಕದಾದ್ಯಂತ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಶಿಕ್ಷಣ ಪಡೆಯುತ್ತಿರುವವರ ಕೌಶಲ್ಯವರ್ಧನೆಗೆ ಸಹಾಯ ಮಾಡಲು ತರಬೇತಿಯನ್ನು ನೀಡುತ್ತದೆ. ಇದಲ್ಲದೆ, ಸಿಒಇ ಕೌಶಲ್ಯ ವರ್ಧನೆಗಾಗಿ ಶ್ರಮಿಸುವ ವೃತ್ತಿಪರರಿಗೆ ಕಾರ್ಯಕ್ರಮಗಳನ್ನು ನೀಡುತ್ತದೆ, ಅದೇ ವೇಳೆ, ಉದ್ಯೋಗಾವಕಾಶವನ್ನು ಹೆಚ್ಚಿಸಲು ಕೌಶಲ್ಯ ತರಬೇತಿ ಮತ್ತು ಪ್ರಮಾಣೀಕರಣವನ್ನು ಒದಗಿಸುತ್ತದೆ. ವರ್ಚುವಲ್ ತಂತ್ರಜ್ಞಾನ ಮತ್ತು ಇತರ ಸುಧಾರಿತ ಮಾಧ್ಯಮಗಳನ್ನು ಬಳಸಿಕೊಂಡು ಅನುಭವಾತ್ಮಕ ಕಲಿಕೆ ಮತ್ತು ವಿಷಯ ಆಧಾರಿತ ಕಲಿಕೆಯನ್ನು ಒದಗಿಸುವ ಮೂಲಕ ಸಂಬಂಧಿತ ಉದ್ಯಮಗಳೊಂದಿಗೆ ಸಹಕರಿಸುವ ಮೂಲಕ ಮೂಲಭೂತ ಮತ್ತು ಸಾಂಸ್ಥಿಕ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವ ಗುರಿಯನ್ನು ಸಿಒಇ ಹೊಂದಿದೆ.


ಕೋರ್ಸ್ ಗಳು

ಮೂಲ (ಬೇಸಿಕ್) ಕೋರ್ಸ್ ಗಳು

 • ಮೆಕ್ಯಾನಿಕಲ್ ಡಿಸೈನ್
 • ಎನ್ ಸಿ ಮೆಷಿನಿಂಗ್
 • ಮೈನ್ ಮಾಡೆಲಿಂಗ್
 • ಸಿಎಇ - ಬಹು ಭೌತಶಾಸ್ತ್ರ ಸಿಮ್ಯುಲೇಶನ್ ಗಳು

ಮುಂದುವರಿದ (ಅಡ್ವಾನ್ಸ್) ಕೋರ್ಸ್ ಗಳು

 • ವೈಟ್ ಮತ್ತು ಟ್ರಿಮ್ ನಲ್ಲಿ ಆಟೋಮೋಟಿವ್ ಬಾಡಿ
 • ಪವರ್ ಟ್ರೈನ್ - ಎಲೆಕ್ಟ್ರಿಕ್ ಮತ್ತು ಸಾಂಪ್ರದಾಯಿಕ
 • ಗಣಿ ಯೋಜನೆ ಮತ್ತು ವೇಳಾಪಟ್ಟಿ
 • ಟೂಲಿಂಗ್ (ಏರೋ ಅಂಡ್ ಆಟೋ) ಮತ್ತು ಕಾಂಪೋಸಿಟ್ ಗಳು

ಅಲ್ಪಾವಧಿ ಕೋರ್ಸ್ ಗಳು

 • ಅಡಿಟೀವ್ ಉತ್ಪಾದನೆ
 • ಮಾಡೆಲ್ ಬೇಸ್ ಸಿಸ್ಟಮ್ಸ್ ಎಂಜಿನಿಯರಿಂಗ್ ಫಂಡಮೆಂಟಲ್ಸ್
 • ವಾಸ್ತುಶಿಲ್ಪ ವಿನ್ಯಾಸ (ಬಿ.ಐ.ಎಂ.)
 • ರೋಬೋಟಿಕ್ ಯೋಜನೆ ಮತ್ತು ಸಿಮ್ಯುಲೇಶನ್

ಯೋಜನೆ (ಪ್ರಾಜೆಕ್ಟ್) ಆಧಾರಿತ ಕಲಿಕೆ

 • ವರ್ಚುವಲ್ ಟ್ವಿನ್ (ಉದ್ಯಮ 4.0)
 • ಐಐಒಟಿ
 • ಗಣಿ ಉತ್ಪಾದನಾ ವ್ಯವಸ್ಥೆ
 • ಅಡ್ವಾನ್ಸ್ ಟೂಲಿಂಗ್ ಎಂಜಿನಿಯರಿಂಗ್

ಮೇಲಿನ ತರಬೇತಿ ಮತ್ತು ಅದಕ್ಕೆ ತೆರೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಕೆಳಗಿನ ಕ್ಷೇತ್ರಗಳಲ್ಲಿ ಸಂಬಂಧಿಸಿದ ಉದ್ಯಮ ಸವಾಲುಗಳನ್ನು ಸುಲಭವಾಗಿ ಕೈಗೊಳ್ಳಲು ನೆರವಾಗುತ್ತದೆ,

 • ವಾಹನಗಳಿಗೆ ಆಕರ್ಷಕ ವಿನ್ಯಾಸ
 • ಇಂಧನ ದಕ್ಷತೆ, ಹೊರಸೂಸುವಿಕೆ ನಿಯಮಗಳು ಮತ್ತು ನಿಯಂತ್ರಣ ಮಾನದಂಡಗಳು
 • ಸುರಕ್ಷತೆ, ಪರಿಸರ, ವಿಶ್ವಾಸಾರ್ಹತೆ, ಉತ್ಪಾದನೆ, ನಿರ್ವಹಣೆ ಮತ್ತು ಪ್ರಮಾಣೀಕರಣಕ್ಕಾಗಿ ವಿನ್ಯಾಸ
 • ಸ್ಮಾರ್ಟ್ ಉತ್ಪಾದನೆ
 • ಭೂವೈಜ್ಞಾನಿಕ ಮಾಡೆಲಿಂಗ್ ಮತ್ತು ಗಣಿ ಯೋಜನೆ
 • ಗಣಿಗಾರಿಕೆ ಸುರಕ್ಷತೆಯನ್ನು ವಿನ್ಯಾಸ ಮತ್ತು ಅರ್ಥೈಸಿಕೊಳ್ಳುವುದು.
 • ಸ್ಮಾರ್ಟ್ ಟೂಲಿಂಗ್ ಮತ್ತು ಎನ್ ಸಿ ಪ್ರೋಗ್ರಾಮಿಂಗ್
 • ವಿನ್ಯಾಸದ ಕಲ್ಪನೆಯ ಸೃಷ್ಟಿಯೊಂದಿಗೆ ಅಡಿಟೀವ್ ಉತ್ಪಾದನೆ

ಹೈದರಾಬಾದ್ ಮತ್ತು ಕರ್ನಾಟಕ ಪ್ರದೇಶದಲ್ಲಿ ಉತ್ಕೃಷ್ಟತೆಯ ಕೇಂದ್ರಗಳು

 • ಹುಮನಾಬಾದ್
 • ಯಾದಗಿರಿ
 • ಲಿಂಗಸುಗೂರು
 • ಹೊಸಪೇಟೆ

ಡಸಾಲ್ಟ್ ಸಿಸ್ಟಮ್ಸ್-ಕೋರ್ಸ್‌ಗಳು

ಡಸಾಲ್ಟ್ ಸಿಸ್ಟಮ್ಸ್ - ಸಂಪರ್ಕ ವಿವರಗಳು

 

ಇತ್ತೀಚಿನ ನವೀಕರಣ​ : 15-03-2022 12:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080