ಅಭಿಪ್ರಾಯ / ಸಲಹೆಗಳು

ಹರಿಹರ

ಜಿಟಿಟಿಸಿ ಉತ್ಕೃಷ್ಟತೆಯ ಕೇಂದ್ರಗಳು 

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ [ಜಿಟಿಟಿಸಿ] ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಡಿಯಲ್ಲಿ ಸ್ಥಾಪಿಸಿದ ಮೊದಲ ಉತ್ಕೃಷ್ಟತೆಯ ಕೇಂದ್ರವು ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ.

ಜಿಟಿಟಿಸಿ ಉತ್ಕೃಷ್ಟತೆಯ ಕೇಂದ್ರವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುವ ಕಂಪನಿಗಳ ಸಹಭಾಗಿತ್ವದಲ್ಲಿ, ಆಯಾ ಕೈಗಾರಿಕೆಗಳಲ್ಲಿ ಉತ್ತಮ ಗುಣಮಟ್ಟದ ತರಬೇತಿಯನ್ನು ದೊರಕಿಸುವ ಸ್ಪಷ್ಟ ಉದ್ದೇಶದೊಂದಿಗೆ ವಿನ್ಯಾಸಗೊಳಿಸಿದೆ.

 

ಉತ್ಕೃಷ್ಟತಾ ಕೇಂದ್ರಗಳ ಉದ್ದೇಶಗಳು

 • ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯಗಳು ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಮತ್ತು ಸಮಕಾಲೀನ ಕಲಿಕಾ ವಿಧಾನಗಳನ್ನು ಬಳಸಿಕೊಂಡು ಉದ್ಯಮ ಆಧಾರಿತ ತರಬೇತಿಯ ಮೂಲಕ ಉದ್ಯಮದ ಬೇಡಿಕೆಗಳನ್ನು ಎದುರಿಸಲು ಅವರಿಗೆ ಅನುವು ಮಾಡಿಕೊಡುವುದು.
 • ವಿದ್ಯಾರ್ಥಿಗಳನ್ನು ಉದ್ಯಮ-ಸಿದ್ಧಗೊಳಿಸಲು ಸಮಗ್ರ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು.
 • ಸಮಕಾಲೀನ ತಂತ್ರಜ್ಞಾನದಲ್ಲಿ ಸಂಶೋಧನೆಗಾಗಿ ಜಾಗತಿಕ ಮಾರುಕಟ್ಟೆಯ ಲಾಭವನ್ನು ಪಡೆಯಲು ಶಿಕ್ಷಣ ತಜ್ಞರನ್ನು ಬೆಂಬಲಿಸಲು.
 • ಉದ್ಯಮ ಸಂಬಂಧಿತ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯ ಮಾಡಲು.
 • ವಿದ್ಯಾರ್ಥಿಗಳು ಮತ್ತು ಕೈಗಾರಿಕೆಗಳಿಗೆ, ಕೌಶಲ್ಯ ವರ್ಧನೆ ಮತ್ತು ನಾವಿನ್ಯತೆಗೆ ವಿಶಿಷ್ಟ ವೇದಿಕೆಯನ್ನು ಒದಗಿಸಲು.
 • ಮೆಕ್ಯಾನಿಕಲ್, ಇನ್ ಸ್ಟ್ರುಮೆಂಟೇಶನ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಆಟೋಮೊಬೈಲ್ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ನಂತಹ ವಿವಿಧ ತಾಂತ್ರಿಕ ಕ್ಷೇತ್ರಗಳಲ್ಲಿ ಸಮಾಲೋಚನೆಗಾಗಿ ಒಂದು ವೇದಿಕೆಯನ್ನು ನೀಡಲು.
 • PTC

ಡಿಸೈನ್ ಟೆಕ್ ಪಿಟಿಸಿಯ ಮೌಲ್ಯವರ್ಧಿತ ಮರು ಮಾರಾಟಗಾರನಾಗಿದೆ - ಉತ್ಪನ್ನ ಜೀವನಚಕ್ರ (ಲೈಫ್ ಸೈಕಲ್) ನಿರ್ವಹಣೆ (ಪಿಎಲ್.ಎಂ), ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು  ವರ್ಧಿತ ವಾಸ್ತವ (ಆಗ್ಮೆಮೆಂಟೆಡ್ ರಿಯಾಲಿಟಿ)- (ಎಆರ್) ಕ್ಷೇತ್ರಗಳಲ್ಲಿ ಪ್ರಮುಖ ತಂತ್ರಾಂಶ ಕಂಪನಿಯಾಗಿದೆ. ಕಂಪನಿಯು ಈ ಎರಡು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ: ತಂತ್ರಾಂಶ ಉತ್ಪನ್ನಗಳು ಮತ್ತು ವೃತ್ತಿಪರ ಸೇವೆಗಳು.

 

ಇದು ಇಡೀ ಉತ್ಪನ್ನ ಜೀವನಚಕ್ರದಾದ್ಯಂತ ಉತ್ಪನ್ನಗಳನ್ನು ಹೇಗೆ ರಚಿಸಲಾಗುತ್ತದೆ ಮತ್ತು ಸೇವೆ ನೀಡಲಾಗುತ್ತದೆ ಎಂಬುದನ್ನು ಬದಲಾಯಿಸುವ ನಾವೀನ್ಯಪೂರಣ ಪರಿಹಾರಗಳನ್ನು ನೀಡುತ್ತದೆ. ಪಿಎಲ್.ಎಂ, ಐಒಟಿ ಮತ್ತು ಎಆರ್ ಹೊರತುಪಡಿಸಿ, ಕಂಪನಿಯು ಸಿಎಡಿ ಮತ್ತು ಸರ್ವೀಸ್ ಜೀವನಚಕ್ರ ನಿರ್ವಹಣೆ (ಎಸ್ ಎಲ್ ಎಂ) ಯಲ್ಲಿ ಪರಿಹಾರಗಳನ್ನು ಒದಗಿಸುತ್ತದೆ.

 

ಉತ್ಪನ್ನ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯೋಗಾಲಯ 

ಈ ಪ್ರಯೋಗಾಲಯದಲ್ಲಿ ನಾವು ಕ್ರಿಯೋ, 3ಡಿ ಕ್ಯಾಡ್/ಪಿಎಲ್ಎಂ ತಂತ್ರಾಂಶ ಮತ್ತು ಉತ್ಪನ್ನ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಪರಿಹಾರಗಳೊಂದಿಗೆ ನಿಮ್ಮ ಉತ್ಪನ್ನಗಳ ಕಲ್ಪನೆ, ವಿನ್ಯಾಸ, ರಚನೆ ಮತ್ತು ಆವಿಷ್ಕರಿಸಲು ಕ್ರಿಯೋವನ್ನು ಬಳಸುತ್ತೇವೆ. ಆಗ್ಮೆಂಟೆಡ್ ರಿಯಾಲಿಟಿ: ಮುಂಚೂಣಿ ಕೆಲಸಗಾರರಿಗೆ ನಿರ್ಣಾಯಕ ಮಾಹಿತಿಯನ್ನು ತಲುಪಿಸಿ-ನಿಖರವಾಗಿ ಯಾವಾಗ ಮತ್ತು ಎಲ್ಲಿ ಬೇಕೋ ಅಲ್ಲಿ ಪೂರೈಸುತ್ತದೆ.

ಡೊಮೇನ್: ಕ್ಯಾಡ್ ಅಂಡ್ ಪಿ.ಎಲ್.ಎಂ.

ಸಜ್ಜುಗೊಳಿಸಲಾದ ತಂತ್ರಾಂಶಗಳು: ಕ್ರಿಯೋ, ವಿಂಡ್ ಚಿಲ್.

ನೀಡಲಾದ ಕೋರ್ಸ್ ಗಳು.

 • ವಿನ್ಯಾಸಕ್ಕಾಗಿ ಕ್ರಿಯೋ.
 • ಕೈಗಾರಿಕಾ ಕ್ರಿಯೋ
 • ಆಟೋಮೋಟಿವ್ ಡಿಸೈನ್ ನಲ್ಲಿ ಪರಿಣತಿಯ ಕಾರ್ಯಕ್ರಮ (ಸ್ಪೆಶಲೈಸೇಶನ್ ಪ್ರೋಗ್ರಾಂ)
 • ಟೂಲ್ ಮತ್ತು ಡೈ ಡಿಸೈನ್ ನಲ್ಲಿ ಪರಿಣತಿಯ ಕಾರ್ಯಕ್ರಮ
 • ಮೆಷಿನ್ ಡಿಸೈನ್ ನಲ್ಲಿ ಪರಿಣತಿಯ ಕಾರ್ಯಕ್ರಮ
 • ವ್ಯುಫೋರಿಯಾ ಸ್ಟುಡಿಯೋದೊಂದಿಗೆ ಆಗ್ಮೆಂಟೆಡ್ ರಿಯಾಲಿಟಿ
 • ಮ್ಯಾಥ್ ಕ್ಯಾಡ್

ಉತ್ಪಾದನೆ ಮತ್ತು ಯಂತ್ರ ತಯಾರಿಕೆ ಪ್ರಯೋಗಾಲಯ 

ನಾವು ಯಂತ್ರೋಪಕರಣ ಪ್ರೋಗ್ರಾಮಿಂಗ್, ನಂತರದ ಪ್ರಕ್ರಿಯೆಗಳು (ಪೋಸ್ಟ್ ಪ್ರೊಸೆಸಿಂಗ್) ಮತ್ತು ಮೆಷಿನಿಂಗ್ ಸಿಮ್ಯುಲೇಶನ್ ಗಾಗಿ ಕಂಪ್ಯೂಟರ್-ನೆರವಿನ ಉತ್ಪಾದನೆ (ಸಿಎಎಂ) ತಂತ್ರಾಂಶ ಪರಿಹಾರಗಳನ್ನು ಬಳಸುತ್ತೇವೆ ಮತ್ತು ವಿಂಡ್ ಚಿಲ್ ಪಿಎಲ್ಎಂ ವೇದಿಕೆಯಿಂದ ಅದು ಬೆಂಬಲಿತವಾಗಿದೆ. ಎನ್.ಸಿ ಪ್ರೋಗ್ರಾಮಿಂಗ್ ಮತ್ತು ಮೆಷಿನಿಂಗ್ ನೊಂದಿಗೆ ನಾವು ಹೆಚ್ಚು ಪರಿಣಾಮಕಾರಿ ಮೆಷಿನಿಂಗ್ ಮತ್ತು ಟೂಲ್ ಪಾತ್ ವಿನ್ಯಾಸದ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುತ್ತೇವೆ, ಮೆಷಿನಿಂಗ್, ಟೂಲಿಂಗ್, ಶೀಟ್ ಮೆಟಲ್ ಮತ್ತು ಅಡಿಟೀವ್ ಉತ್ಪಾದನೆ.

ಡೊಮೇನ್ಸಿಎಎಂ, ಎನ್.ಸಿ ಅಂಡ್ ಪಿಎಲ್ಎಂ.

ಸಜ್ಜುಗೊಂಡಿರುವ ತಂತ್ರಾಂಶಗಳು: ಕ್ರಿಯೋ, ವಿಂಡ್ ಚಿಲ್.

ನೀಡಲಾಗುವ ಕೋರ್ಸ್ ಗಳು:

 • ಎನ್.ಸಿ ಪ್ರೋಗ್ರಾಮಿಂಗ್ ಮತ್ತು ಮೆಷಿನಿಂಗ್.
 • ಪ್ರೊಡಕ್ಷನ್ ಎಂಜಿನಿಯರ್ ಗಳಿಗಾಗಿ ಕ್ರಿಯೋ.
 • ಪಿಪಿಎಂ - ವಿಂಡ್ ಚಿಲ್ ನಲ್ಲಿ ಸ್ಪೆಶಲೈಸೇಶನ್ ಪ್ರೋಗ್ರಾಂ

ಮೌಲ್ಯವರ್ಧನೆ ಪ್ರಯೋಗಾಲಯ

ಕ್ರಿಯೋ ಸಿಮ್ಯುಲೇಶನ್ ಲೈವ್ ಎಂಬುದು ಎಎನ್.ಎಸ್ ವೈಎಸ್ ತಂತ್ರಜ್ಞಾನವನ್ನು ಕ್ರಿಯೋದಲ್ಲಿ ಸಂಯೋಜಿಸುತ್ತದೆ. ಪರಿಹಾರವು ಸ್ಥಿರ ರಚನಾತ್ಮಕ, ಉಷ್ಣ ಮತ್ತು ಮಾದರಿ (ಕಂಪನ) ಸಿಮ್ಯುಲೇಶನ್ ಗೆ ಸಕಾಲಿಕ ವಿಶ್ಲೇಷಣೆ ಫಲಿತಾಂಶಗಳನ್ನು ಒದಗಿಸುತ್ತದೆ.

ಡೊಮೇನ್: ಸಿಎಇ ಅಂಡ್ ಪಿಎಲ್ಎಂ.

ಸಜ್ಜುಗೊಂಡಿರುವ ತಂತ್ರಾಂಶಗಳು: ಕ್ರಿಯೋ, ವಿಂಡ್ ಚಿಲ್.

ನೀಡಲಾಗುವ ಕೋರ್ಸ್ ಗಳು:

 • ವಿಶ್ಲೇಷಕರಿಗೆ ಕ್ರಿಯೋ.


ಆಟೋಮೇಶನ್ ಮತ್ತು ನಿಯಂತ್ರಣ ಪ್ರಯೋಗಾಲಯ

ಇಲ್ಲಿ ನಾವು ಸಂಕೀರ್ಣ ಮೆಕಾಟ್ರಾನಿಕ್ ವ್ಯವಸ್ಥೆಗಳು, ಮಾಡ್ಯೂಲ್ ಗಳು ಮತ್ತು ಉಪವ್ಯವಸ್ಥೆಗಳಲ್ಲಿ ಪ್ರೋಗ್ರಾಮಬಲ್ ಲಾಜಿಕ್ ನಿಯಂತ್ರಕಗಳ ಪಾತ್ರವನ್ನು ಅರ್ಥೈಸಿಕೊಳ್ಳುತ್ತೇವೆ ಮತ್ತು ವ್ಯವಸ್ಥೆಯಲ್ಲಿ ಮಾಹಿತಿಯ ಹರಿವನ್ನು ಅರ್ಥಮಾಡಿಕೊಳ್ಳುತ್ತೇವೆ.

ಡೊಮೇನ್: ಪಿಎಲ್.ಸಿ, ಎಚ್.ಎಂಐ, ಎಸ್.ಸಿ.ಎ.ಡಿ.ಎ.

ಸಜ್ಜುಗೊಂಡಿರುವ ತಂತ್ರಾಂಶಗಳು: ಕ್ರಿಯೋ, ವಿಂಡ್ ಚಿಲ್.

ನೀಡಲಾಗುವ ಕೋರ್ಸ್ ಗಳು:

 • ಕನಿಷ್ಠ ಪಿಎಲ್.ಸಿ ಜ್ಞಾನ.
 • ಎಸ್.ಸಿ.ಎ.ಡಿ.ಎ.ಯ ಮೂಲಭೂತ ಅಂಶಗಳು.
 • ಕೈಗಾರಿಕಾ ಮಟ್ಟದ ನಿಯಂತ್ರಣ ವ್ಯವಸ್ಥೆ.
 • ಕೈಗಾರಿಕಾ ಬ್ಯಾಚ್ ಪ್ರಕ್ರಿಯೆ ರಿಯಾಕ್ಟರ್ ವ್ಯವಸ್ಥೆ.
 • ಪ್ರಕ್ರಿಯೆ ಸಾಧನದ ಮೂಲಭೂತ ಅಂಶಗಳು.
 • ಪಿಎಲ್.ಸಿ ಮತ್ತು ಎಸ್.ಸಿಎಡಿಎ ಯೊಂದಿಗೆ ಮುಂದುವರಿದ ಪ್ರಕ್ರಿಯೆಯ ನಿಯಂತ್ರಣ ತಂತ್ರಗಾರಿಕೆ
 • ಸುಧಾರಿತ ಕೈಗಾರಿಕಾ ಎಲೆಕ್ಟ್ರೋ-ನ್ಯೂಮ್ಯಾಟಿಕ್ ವ್ಯವಸ್ಥೆ.
 • ಇಂಡಸ್ಟ್ರಿಯಲ್ ಪಿಎಲ್.ಸಿ ಆಧಾರಿತ ಎಲೆಕ್ಟ್ರೋ-ಹೈಡ್ರಾಲಿಕ್ ಸಾರ್ಟಿಂಗ್ ಸಿಸ್ಟಮ್

ರಿವರ್ಸ್ ಎಂಜಿನಿಯರಿಂಗ್ ಪ್ರಯೋಗಾಲಯ 

ರೀಸ್ಟೈಲ್ (ರಿವರ್ಸ್ ಎಂಜಿನಿಯರಿಂಗ್) ಪಾರ್ಶ್ವೀಯ ಅಥವಾ ತ್ರಿಕೋನೀಕೃತ ದತ್ತಾಂಶದ ಮೇಲೆ ಮೇಲ್ಮೈ ಕ್ಯಾಡ್ ಮಾದರಿಯನ್ನು ಮರುನಿರ್ಮಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ನೇರವಾಗಿ ಪಾರ್ಶ್ವೀಯ ದತ್ತಾಂಶವನ್ನು ಆಮದು ಮಾಡಬಹುದು ಅಥವಾ ಕ್ರಿಯೋ ಪ್ಯಾರಾಮೆಟ್ರಿಕ್ ನ ಫೇಸೆಟ್ ಮಾಡೆಲಿಂಗ್ ಕಾರ್ಯಾತ್ಮಕತೆಯನ್ನು ಬಳಸಿಕೊಂಡು ಪಾಯಿಂಟ್ ಸೆಟ್ ದತ್ತಾಂಶವನ್ನು ಪರಿವರ್ತಿಸುವ ಮೂಲಕ ಅದನ್ನು ರಚಿಸಬಹುದು.

ಡೊಮೇನ್: ಪಿಎಲ್ಎಂ, ಸಿಎಡಿ.

ಸಜ್ಜುಗೊಂಡ ಯಂತ್ರಾಂಶ : ಪೋರ್ಟಬಲ್ ವೈಟ್ ಲೈಟ್ ಸ್ಕ್ಯಾನರ್.

ಸಜ್ಜುಗೊಂಡ ತಂತ್ರಾಂಶಗಳು: ಕ್ರಿಯೋ, ವಿಂಡ್ ಚಿಲ್.

ನೀಡಲಾಗುವ ಕೋರ್ಸ್ ಗಳು:

 • ರಿವರ್ಸ್ ಎಂಜಿನಿಯರಿಂಗ್.

3ಡಿ ಪ್ರಿಂಟಿಂಗ್ ಪ್ರಯೋಗಾಲಯ 

ವಸ್ತು ಬಳಕೆ ಮತ್ತು ಸಮಯ ಉಳಿಸುವುದನ್ನು ಅರ್ಥಮಾಡಿಕೊಂಡು ನಾವು 3ಡಿ ಪ್ರಿಂಟರ್ ಗಳಿಗೆ ನೇರ ಸಂಪರ್ಕವನ್ನು ಹೊಂದಿದ್ದೇವೆ. ಸಂಪೂರ್ಣ 3ಡಿ ಮುದ್ರಣ ತಪಾಸಣೆ ಮತ್ತು ಮುದ್ರಕದ ಡ್ರೈವರ್ ಗಳು ಮತ್ತು ಪ್ರೊಫೈಲ್ ಗಳನ್ನು ನಿರ್ವಹಿಸಲಾಗುತ್ತಿದೆ. ಆನ್ ಲೈನ್ ಪ್ರಿಂಟ್ ಬ್ಯೂರೋಗಳಿಗೆ ಸಂಪರ್ಕವಿದೆ.

ಡೊಮೇನ್: ಎಫ್.ಇಎ, ಕ್ಯಾಡ್, ಆರ್ ಪಿಟಿ.

ಸಜ್ಜುಗೊಂಡಿರುವ ತಂತ್ರಾಂಶಗಳು: ಕ್ರಿಯೋ, ವಿಂಡ್ ಚಿಲ್.

ನೀಡಲಾಗುವ ಕೋರ್ಸ್ ಗಳು:

 • ತ್ವರಿತ ಪ್ರೊಟೊ ಟೈಪಿಂಗ್.


ವಾಸ್ತವ (ರಿಯಾಲಿಟಿ) ಪ್ರಯೋಗಾಲಯ

ಆಗ್ಮೆಂಟೆಡ್ ರಿಯಾಲಿಟಿ ಭೌತಿಕ ಮತ್ತು ಡಿಜಿಟಲ್ ಜಗತ್ತಿನ ಸಂಯೋಜನೆಯಿಂದ ರಚಿಸಲಾದ ಮೌಲ್ಯವನ್ನು ಮುಕ್ತಗೊಳಿಸುತ್ತದೆ.

ಡೊಮೇನ್: ಎಆರ್.

ಸಜ್ಜುಗೊಂಡಿರುವ ತಂತ್ರಾಂಶಗಳು: ವ್ಯುಫೋರ್ನಿಯಾ.

ನೀಡಲಾಗುವ ಕೋರ್ಸ್ ಗಳು:

 • ವ್ಯುಫೋರ್ನಿಯಾ ಸ್ಟುಡಿಯೋದೊಂದಿಗೆ ಆಗ್ಮೆಂಟೆಡ್ ರಿಯಾಲಿಟಿ.


ಇಂಟರ್ನೆಟ್ ಆಫ್ ಥಿಂಗ್ಸ್ ಪ್ರಯೋಗಾಲಯ 

ನಿಮ್ಮ ವ್ಯವಹಾರ ಸವಾಲುಗಳನ್ನು ಎದುರಿಸಲು ಐಒಟಿ ವೇದಿಕೆ ಉದ್ದೇಶ-ನಿರ್ಮಿಸಲಾದ ಥಿಂಗ್ ವರ್ಕ್ಸ್ ನೊಂದಿಗೆ ಡಿಜಿಟಲ್ ರೂಪಾಂತರಕ್ಕೆ ನಿಮ್ಮ ಅಡೆತಡೆಗಳನ್ನು ತೆಗೆದುಹಾಕಿ. ಭೌತಿಕ ಮತ್ತು ಡಿಜಿಟಲ್ ಪ್ರಪಂಚಗಳ ಸಂಯೋಜನೆಯಿಂದ ರಚಿಸಲಾದ ಮೌಲ್ಯವನ್ನು ಮುಕ್ತಗೊಳಿಸಿ ಬಳಸಿ.

ಡೊಮೇನ್: ಐಒಟಿ, ಪಿಎಲ್ಎಂ.

ಸಜ್ಜುಗೊಂಡಿರುವ ತಂತ್ರಾಂಶಗಳು: ಥಿಂಗ್ ವರ್ಕ್ಸ್ (ThingWorx).

ನೀಡಲಾಗುವ ಕೋರ್ಸ್ ಗಳು:

 • ಥಿಂಗ್ ವರ್ಕ್ಸ್ (ThingWorx) ನೊಂದಿಗೆ ಐಒಟಿ ಮಾಡೆಲಿಂಗ್.

 • ಥಿಂಗ್ ವರ್ಕ್ಸ್ (ThingWorx) ನೊಂದಿಗೆ ಐಒಟಿ ಅಭಿವೃದ್ಧಿಯ ಮೂಲಭೂತ ಅಂಶಗಳು.


 ಸಂಪರ್ಕ ವಿವರಗಳು:

ಕೇಂದ್ರ

ಹೆಸರು

ಸಂಪರ್ಕ ಸಂಖ್ಯೆ

ಇಮೇಲ್

ಬೆಳಗಾವಿ

ಶ್ರೀ ಬಿ.ಜಿ. ಮೊಗೇರ್

9141630309

gttcbelgaum@gmail.com

ಹುಬ್ಬಳ್ಳಿ

ಶ್ರೀ ಮಾರುತಿ ಭಜಂತ್ರಿ

9902101010

gttc.sdc@gmail.com

ಹುಬ್ಬಳ್ಳಿ

ಶ್ರೀ ಅಶೋಕ ವಾಲೀಕರ್

9035589999

gttc.hubli@gmail.com

 

ಹರಿಹರ

ಶ್ರೀ ಲಕ್ಷ್ಮಣ್ ನಾಯಕ್

8711913947

gttcharihar@gmail.com

ತುಮಕೂರು

ಶ್ರೀ ಗುರುಪ್ರಸನ್ನ

9448200407

gttctumkur@gmail.com

ಶಿವಮೊಗ್ಗ

ಶ್ರೀ ಸುರೇಶ್ ಹೆಚ್ ಎಂ

9141630313

gttcshivamogga@gmail.com

ಹಾಸನ

ಶ್ರೀ ಓಬಯ್ಯ

9141630306

principalhassan@gmail.com

ಮಂಗಳೂರು

ಶ್ರೀ ಕುಮಾರಸ್ವಾಮಿ

9481262287

gttcmngcoe@gmail.com

ಮಂಗಳೂರು

ಶ್ರೀ ಮೃತುಂಜಯ್ ಗೌಡ

7975621917

gttcmng@gmail.com


 

ಇತ್ತೀಚಿನ ನವೀಕರಣ​ : 02-03-2022 12:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080